Surprise Me!

News Cafe | ದೇವಸ್ಥಾನದ ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಸಂಘರ್ಷ | June 19, 2022

2022-06-19 4 Dailymotion

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ 2 ಗುಂಪುಗಳ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ ಆಗಿದೆ. ಕಾರು ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆ 37 ವರ್ಷದ ಸತೀಶ್ ಪಾಟೀಲ್ ಹತ್ಯೆಯಲ್ಲಿ ಕೊನೆ ಆಗಿದೆ. ಹತ್ಯೆ ಬಳಿಕ ತೀವ್ರವಾಗಿ ಹಿಂಸಾಚಾರ ಭುಗಿಲೆದ್ದಿದ್ದು 4 ಕಾರು, 1 ವಾಟರ್ ಟ್ಯಾಂಕ್ ಲಾರಿ, 2 ಟೆಂಪೋ, 1 ಟ್ರ್ಯಾಕ್ಟರ್, ಮೇವಿನ ಬಣವೆಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಐವರು ಕೊಲೆ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಗ್ರಾಮದಲ್ಲೀಗ ಉದ್ವಿಗ್ನ ವಾತಾವರಣ ಇದ್ದು ಪೊಲೀಸ್ ಭದ್ರತೆ ನೀಡಲಾಗಿದೆ. ಇನ್ನು ಕಾಳಭೈರವನಾಥ ದೇವಸ್ಥಾನಕ್ಕೆ ಸೇರಿದ ಜಮೀನು ವಿವಾದ ಕೋರ್ಟ್‍ನಲ್ಲಿತ್ತು. ಈ ಬಗ್ಗೆ ದೇವಸ್ಥಾನಕ್ಕೆ ಮೀಸಲಿಟ್ಟ ಜಾಗ ಮಾರಲು ಹುನ್ನಾರ ಆರೋಪ ಮಾಡಲಾಗಿತ್ತು. ಆದರೆ ದೇವಸ್ಥಾನ ಜಮೀನು ಉಳಿವಿಗಾಗಿ ಸತೀಶ್ ಪಾಟೀಲ್ ಹೋರಾಟ ಮಾಡ್ತಿದ್ರು.. 'ಭೂ ಉಳಿತಾಯ ಮೋರ್ಚಾ' ಹೆಸರಿನಲ್ಲಿ ಸತೀಶ್ ಹೋರಾಟ ಮಾಡ್ತಿದ್ರು.<br /><br />#publictv #newscafe #belagavi <br />

Buy Now on CodeCanyon